Monday 16 May 2016

ನೆರಳು



'ನೆರಳು' ಕಂಡರೆ
ಬೆಚ್ಚಿ ಬೆದರುವರು
ಭೂತವೆಂದು ಭ್ರಮಿಸುವರು!

'ನೆರಳು' ಕಂಡರೆ
ವಿರಮಿಸುವರು
ಹಾಯಾಗಿ ಮೈಚೆಲ್ಲುವರು

ಛಾಯೆಯೊಂದೇ
ಆದರೆ
ಮನುಷ್ಯ, ಮರ ಬೇರೆ ಬೇರೆ !

No comments:

Post a Comment