ಶಿಶುನಾಳಧೀಶರ ಕ್ಷಮೆಕೋರಿ
ಸೋರುತಿಹುದು ಮುಗಿಲ ಮಾಳಿಗೆ
ಸೋರುತಿಹುದು ಮುಗಿಲ ಮಾಳಿಗೆ
ಸೈಕ್ಲೋನಿನಿಂದ
ಸೋರುತಿಹುದು ಮುಗಿಲ ಮಾಳಿಗೆ
ವಾಯುಭಾರ ನೋಡು ಬಾರಾ
ಶೀತದಿಂದ ತಲೆಯು ಭಾರ
ನೆಗಡಿಯಿಂದ ಜೋರು ಜ್ವರ
ತಲೆಯನೆತ್ತಿ ನೋಡಲಾರೆ
ಮೇಲಕೇರಿ ಹೋಗಲಾರೆ
ಮುಗಿಲ ಮಾಳಿಗೆ ಮುಚ್ಚಲಾರೆ
ಕಾಂತೆ ಕೇಳೆ ಕರುಣದಿಂದ
ಮಾತ್ರೆ ತಾರೆ ಕ್ಲಿನಿಕ್ನಿಂದ
ಮಾಡು ಮುಚ್ಚಲು ಪ್ಲಾಸ್ಟರೊಂದ!
ಮೋಡವೇರಲು ಏಣಿ ಎಲ್ಲಿಂದ?
ಎಂತು ತರುವನು, ಶಶಿನಾಳಧೀಶನು
ಮನೆಯ ತೊರೆವ ಮುನ್ನ ನೀನು
ಮಾಡು ಮುಚ್ಚಿ, ಮಳೆಯ ನಿಲಿಸೋ
ನಿಂತು ಪೊರೆದು, ಕರುಣೆ ತೋರೋ
No comments:
Post a Comment