Sunday 7 July 2013

ಬುದ್ಧ ನಿರ್ವಾಣ


ಮಾರ್ಜಾಲ ನಡಿಗೆಯಲಿ
ವೈಯ್ಯರದ ಮಿಂಚು
ಬೆಡಗಿಯೊಂದಿಗೆ ಹೆಜ್ಜೆ ಹಾಕುತಿತ್ತು...
ಪ್ರಾಯ ಎದೆಯೊಳಗೆ ತುಂಬಿ ತುಳುಕಿ
ತನ್ನಿರವ ತೋರಲು ಹೊಂಚುತಿತ್ತು...

ಹೆಸರಿಗಷ್ಟೇ ಉಡುಪು ವಿನ್ಯಾಸ
ನಡೆವುದೆಲ್ಲ ವಸ್ತ್ರ  ಸನ್ಯಾಸ
ಅಡಿಯಿಂದ ಮುಡಿವರೆಗೂ
ಬುದ್ಧ ನಿರ್ವಾಣದ ಹೆಜ್ಜೆ ಗುರುತು

ನಡಿಗೆಯಷ್ಟೇ ಸಾಕೆ, ನಡೆ-ನುಡಿ ಬೇಡವೇ?
ಬಿಚ್ಚಿದರೂ ಮುಚ್ಚಿದಂತಿದೆ
ಮಧ್ಯಮ ಮಾರ್ಗ
ದಕ್ಕುವುದು, ಸಿಕ್ಕುವುದು
ಸುಲಭ, ಕಷ್ಟ ಸಾಧ್ಯ!

ದೇಹ ಬೆತ್ತಲಾದರೇನು?
ರೂಪ ದರ್ಶನ , ಪ್ರದರ್ಶನ ಸುಲಭ
ಅಂತರ್ ದರ್ಶನ ದುರ್ಲಭ
ಚಂಚಲ ಭಾವ ವಿಕೃತಿಗೆ ನಾಂದಿ
ಮನ ತೆರೆದರಷ್ಟೇ ಸಿದ್ಧಿ

No comments:

Post a Comment