Wednesday 9 December 2015

ಭರವಸೆಯ ಬಿಂದು


ಮುಗಿಲ ಚಾವಣಿ ತೂತಾಗಿ ಉದುರುತ್ತಿವೆ
ಮೇಘಮಾಲೆಯ ಮುತ್ತುಗಳು
ಹುಲ್ಲಹಾಸನು ಮುತ್ತಿಕ್ಕಿ ನಗುತಿವೆ..
ಮಿರಮಿರನೆ ಮಿನುಗೋ ಇಬ್ಬನಿ
ಭೂರಮೆಯ ಕಣ್‍ಕೊಳದ ಕಂಬನಿ
ಸುಕೋಮಲ ಎಸಳ ನೇವರಿಸಿ
ಬಾಚಿತಬ್ಬಿದೆ ಮುಂಜಾವು
ಮುದ್ಧಿಸಿ; ಸಾಂತ್ವನದ ಬೆಳಕ ಚೆಲ್ಲಿ!

ಗರಿಯ ಸಖ್ಯ ತೊರೆದು
ಜಲಬಿಂದು ಜಾರಿದೆ;
ಭರವಸೆಯ ಬೆಳಕಿನಲಿ
ಕರಗಿ ಒಂದಾಗಿದೆ..

No comments:

Post a Comment