Wednesday 9 December 2015

ಒಣ ಎಲೆ ಮತ್ತು ಜೀವ

ಗಾಳಿಗೆ ತೂಗುತ್ತಿದೆ
ನಂದಾದೀಪ
ತಂಗಾಳಿಗೂ ಬೆವರಿ, ಬೆದರುತ್ತಿದೆ
ತೂಗುಯ್ಯಾಲೆ, ತಂತಿಯ ನಡಿಗೆ
ತಂತು ಹರಿದು ಒಡೆದೀತು ಗಡಿಗೆ
ಉಸಿರಿನಿಂದಲೇ ಉಸಿರು
ನಿಲ್ಲುವ ಗಳಿಗೆ
ತೊಟ್ಟು ಕಳಚಿ ಬಿಕ್ಕುತ್ತಿದೆ
ಒಣ ಪರ್ಣ
ಮರವ ತೊರೆದು ನೆಲ ಕಚ್ಚುತ್ತಿದೆ
ತಲೆಬಾಗಿ, ಮಣ್ಣಾಗಿ, ಉಸಿರಾಗಿ
ಚಿಗುರೆಲೆಗೆ ವರವಾಗಿ..
ಕೊಡ ಒಡೆದರೂ ಮಣ್ಣು
ಎಲೆ ಉದುರಿದರೂ ಮಣ್ಣು
ದೇಹವಳಿದರೂ ಮಣ್ಣು
ಹಿಡಿ ಬೂದಿಯೊಳಗೆ ಬ್ರಹ್ಮಾಂಡ
ಅಂಡ, ಪಿಂಡ ಬೀಜದೊಳಗೆ
ಮತ್ತದೇ ಮನುಜ, ಚಿಗುರೆಲೆಯ
ಮರ್ಮರ..!

No comments:

Post a Comment