Thursday, 15 October 2015

ಸಾಧನೆಯ ಹಾದಿಯಲಿ..


ಮುಳ್ಳಲ್ಲೇ ಮೊಗ್ಗಾಗಿ, ನೋವಲ್ಲೆ ಹೂವಾಗಿ ಅರಳಿದವರು
ಮಾತಿನ ಮೊನೆಯಲ್ಲಿ ಇರಿದರೂ ನೋಯದೇ
ಕಲ್ಲಲ್ಲೆ ಶಿಲೆಯಾಗಿ ಮೂಡಿದವರು

ಟೀಕೆಗಳ ಸುರಿಮಳೆಗೆ ನೆಂದು ಬೆಂದರೂ
ಕಣ್ಣೀರ ಮುತ್ತಾಗಿ ಸುರಿಸಿದವರು
ನಡೆದ ಹಾದಿಯ ಹೆಜ್ಜೆಗಳ ಗುರುತಲ್ಲಿ
ಅಳಿದರೂ ಅಳಿಯದೇ ಸಾಧನೆಯ ಹಾದಿಯಲಿ
ನಡೆದು ಹೋದವರು

No comments:

Post a Comment