Monday 16 May 2016

ಕವಿತೆ ಕತ್ತೆ



ಕವಿತೆ ಕತ್ತೆ
ಹಿಂದೆ ಹೋದರೆ
ಚಾಟು, ಚುಟುಕುಗಳ
ವ್ಯಂಗ್ಯೋಕ್ತಿಗಳ ಒದೆತ

ಮುಂದರೆ ಬಂದರೆ
ಕರ್ಣ ಕಠೋರ
ಗಾರ್ದಭ ಗಾನ

ಸಾಕಪ್ಪಾ ಸಾಕು ಶಬ್ದಗಳು
ಉಪಮೇಯಗಳು
ಉಪಮಾನಗಳು
ಮಣ ಭಾರ!

ಪ್ರೀತಿ-ಪ್ರೇಮಗಳ,
ಸಾವು- ನೋವುಗಳ
ಸರಸ-ವಿರಸಗಳ
ಸುಖ-ದು:ಖಗಳ
ಕಂತೆ ಕಂತೆ ಕವಿತೆ
ಮುಗಿಯೊಲ್ಲ ಕವನ ಸಂತೆ!
ಸಾಕಪ್ಪಾ ಸಾಕು ಕವಿತೆ ಕತ್ತೆಯ
ಸಹವಾಸ..
 

No comments:

Post a Comment