Monday 16 May 2016

ವಾಯು ವಾಹನ !


ಮರದಿಂದ ಜಾರಿ ಎತ್ತಲೋ ಹಾರಿ
ತೇಲಿ ಮಣ್ಣ ಸೇರುವ ಎಲೆಗೆ
ಗಾಳಿ, ವಾಹನ!
ಗಾಳಿಗೆ ಯಾರು ವಾಹನ?

ಮರದಿಂದ ಸಿಡಿದು, ನೀರ ಕುಡಿದು
ಭೂವಿಯಲ್ಲಿ ಬಸಿರೊಡೆದು,
ಟಿಸಿಲೊಡೆದು ಸಸಿಯಾಗಿ ಮೂಡೋ  ಬೀಜಕ್ಕೆ 
ಗಾಳಿ, ವಾಹನ!
ಗಾಳಿಗೆ ಯಾರು ವಾಹನ?

ಪ್ರತಿ ಹೂವು ಸುಗಂಧ
ತುಂಬಿಹುದು ಮಕರಂದ
ನಾಸಿಕಾಗ್ರದ ಜತೆಗೆ ಮಧುರಾನುಬಂಧ
ಪ್ರಕೃತಿಗೇ ಗಂಧಲೇಪನ ಮಾಡೋ 
ವಾಯುಗೆ ಯಾರು ವಾಹನ?

ಮಣ್ಣಲ್ಲಿ ಮಣ್ಣಾಗುವುದು
ಎಲೆಯ ಗುಣ
ಮೊಳೆತು ಬೆಳೆಯುವುದು ಬೀಜ ಗುಣ
ಉಸಿರಿಗೆ ಜನ್ಮ ನೀಡುವುದು ಮರದ ಗುಣ
ನಿಂತಲ್ಲೇ ಮರವಾದರೆ ಸಾಕು
ಜೀವರಸವಾಗಿ, ಗಾಳಿ  ಹರಿಯುತಿರಲಿ ..

No comments:

Post a Comment