Monday, 29 April 2013

ರೂಪಾಂತರ


ಅರಳು ಮೊಗ್ಗು , ಬಾಲೆ ಬಳುಕು ; ಚಿತ್ತಾಕರ್ಷಕ ಆಕೃತಿ
ಯುವತಿ ಸುತ್ತಿ ಸುಳಿವ ಗಂಡು ಜಾತಿ
ಚಿಟ್ಟೆಯಾಯ್ತು ತತ್ತಿ ಹೊರಳಿ; ಬಂತು ಸಂತತಿ
ಮರಳಿ ಮರಳಿ, ಕಾಲ ಚಕ್ರ ಉರುಳಿ ಉರುಳಿ

ಬಾಲೆ, ಯುವತಿ, ಸತಿ, ಹೆಂಡತಿ, ಮಡದಿ
ಅಕ್ಕ-ತಂಗಿ, ನಾದಿನಿ, ಸೊಸೆ, ಅಮ್ಮ, ಅಜ್ಜಿ...
ಬಹುವರ್ಣ, ಬಹುಪಾತ್ರ ಬದುಕು!

ಕುರುಡು ಕತ್ತಲೆಗೆ, ನಡುಗುವ ಹೆಜ್ಜೆಗಳ ಊರುಗೋಲು
ಮುಖದ ಸುಕ್ಕಲಿ ಮಿಂಚಿ ಮರೆಯಾಗುವ ಬಾಲ್ಯದ ನೆನಪು
ಮರುಜನ್ಮದಲಿ ಮರಳಬಹುದೇ
ಆ ವೈಯ್ಯರ, ಒನಪು...?

೨೮-೦೪-೨೦೧೩

No comments:

Post a Comment