ನನಗಿನ್ನೂ ನೆನಪಿದೆ..
ಅಂದು
ಯಾಂತ್ರಿಕ ಲೋಕದ ಗುಡಿಯಿಂದ
ದಿನರಾತ್ರಿ ನನ್ನಪ್ಪ ಕರೆದೊಯ್ಯುತಿದ್ದರು
ಬಯಲಿಗೆ ...
ಕೈತೋರುತ್ತಿದ್ದರು ಗುರಿಯೆಡೆಗೆ
ಬೆಳದಿಂಗಳ ರಾತ್ರಿಯಲಿ ಮುಗಿಲಿಗೆ ...!
ಇಂದು ಅಪ್ಪ,
ಚಂದ್ರನ ಜತೆಗೆ ಮಿನುಗೋ ನಕ್ಷತ್ರವಾಗಿದ್ದಾರೆ!
ನಡಿಗೆಯ ಪ್ರತಿ ಹೆಜ್ಜೆಯಲ್ಲೂ
ಅವರ ಗುರುತಿದೆ..
ಚಂದಿರನ ಬೆಳಕಿನಲಿ ನನ್ನ
ಹಿಂಬಾಲಿಸೋ ಜನ್ಮದಾತನ ನೆರಳಿದೆ..!
No comments:
Post a Comment