ಗಬ್ಬು ನಾರೋ
ಗೊಬ್ಬರ, ಸಾರಜನಕ
ಹಸಿದ ಹೊಟ್ಟೆಗೆ ಅನ್ನ ನೀಡೋ
ಸಸ್ಯಗಳಿಗೆ ರಂಜಕ, ಗಂಧಕ
ಕಬ್ಬ ರಸವ ಹೀರಿ ಬೆಳೆವ
ಮನುಜನದೋ ಬರೀ
ಅಬ್ಬರ, ಸ್ವಾರ್ಥ ಜನಕ
ಅನ್ಯರಿಗೆ ಅಪ್ರಯೋಜಕ
ಕೊಳೆತು ನಾರುವ ತಲೆಯಲ್ಲಿ
ಒಂದೂ ಮೊಳೆಯುವುದಿಲ್ಲ
ಚಿಂತನೆಯ ಬೀಜ
ಕಸಕ್ಕಿಂತ ಕಡೆಯಾ ಮನುಜ?
No comments:
Post a Comment