Saturday 28 May 2016

ಮಳೆ ಹನಿ



ಮೇಘಗಳ ಘರ್ಷಣೆಗೆ..
ಮಿಂಚುಗಳ ಹೊಡೆತಕ್ಕೆ
ಬೆಚ್ಚಿ ಬೆದರಿ ಭೂತಾಯ ತಬ್ಬಲು
ಭುವಿಗಿಳಿದ ಶಿಶು..!
ಪೆಪ್ಸಿ, ಕೋಲಾ ಕೊಡಿಸೆಂದು
ಹಠ ಹಿಡಿದ ಕಂದನ
ಕೆನ್ನೆಗೆ ಜಾರಿದ ಕಣ್ಣೀರ ಬಿಂದು!

ಬಾಯ್ಬಿರಿದ ಭುಮಿಯಲ್ಲಿ
ಮಳೆ ಬಿಂದು ಸ್ವಾಹಾ..!
ಹನಿಯ ಸಾವಿನಲಿ
ತಣಿಯಿತು ಧರಿತ್ರಿಯ ದಾಹ..!?

No comments:

Post a Comment